ವಿದೇಶದಲ್ಲಿ `ರಾಂಲೀಲಾ` ಹಾಡುಗಳ ಚಿತ್ರೀಕರಣ
Posted date: 17 Wed, Jun 2015 – 10:07:01 AM
‘ಮಸ್ತ್ ಮಜಾ ಮಾಡಿ, ‘ಅಪ್ಪು ಪಪ್ಪು ಮತ್ತು ‘ಸ್ನೇಹಿತರು ಅಂತಹ ಬಹುವೆಚ್ಚದ ಅದ್ದೂರಿ ಚಿತ್ರಗಳನ್ನು ನಿರ್ಮಿಸಿದ ಸೌಂದರ್ಯ ಜಗದೀಶ್ ಅವರು ಸೌಂದರ್ಯ ಜಗದೀಶ್ ಫ಼ಿಲಂ ಲಾಂಛನದಲ್ಲಿ ನಿರ್ಮಿಸುತ್ತಿರುವ ಬಹುನಿರೀಕ್ಷೆಯ ‘ರಾಮ್ ಲೀಲಾ ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣಕ್ಕೆಂದು ಚಿತ್ರತಂಡ ೧೫ದಿನಗಳ ಕಾಲ ವಿದೇಶಕ್ಕೆ ಹೊರಡಲು ಸಿದ್ದವಾಗಿದೆ.
ಮಾತಿನ ಭಾಗದ ಚಿತ್ರೀಕರಣ ಅದ್ದೂರಿಯಾಗಿ ಮೂಡಿಬಂದಿದ್ದು ಹಾಡುಗಳಲ್ಲಿ ಅದರ ಹತ್ತುಪಟ್ಟು ಅದ್ದೂರಿತನವನ್ನು ಮೆರಯಲು ರಷ್ಯಾ ಮತ್ತು ಜಾರ್ಜಿಯಾ ಕಡೆ ಪಯಣ ಬೆಳೆಸಿದೆ ಚಿತ್ರತಂಡ.
ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಅವರ ಸಂಗೀತ ನಿರ್ದೇಶನವಿದೆ. ಭರಣಿ.ಕೆ.ಧರನ್ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸಂಜನಾ, ಸಾಧುಕೋಕಿಲ, ರಂಗಾಯಣ ರಘು, ರವಿಕಾಳೆ, ಚಿಕ್ಕಣ್ಣ, ರವಿಶಂಕರ್ ಗೌಡ, ಶೋಭ್‌ರಾಜ್, ಊರ್ವಶಿ, ತುಳಸಿ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪಿ.ಎನ್.ಸತ್ಯ, ಸಿಹಿಕಹಿ ಚಂದ್ರು, ಕಡ್ಡಿಪುಡಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed